ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ, ಕುದುರೆಮುಖ ಬೆಟ್ಟದ ತಪ್ಪಲಿನ, ಜಾರ್ಕುಣಿ ಎಂಬ ಹೆಸರಿನ ಸ್ಥಳದಲ್ಲಿ ಈ ಕುದುರೆಮುಖ ಮತ್ತು ನೇತ್ರಾವತಿ ಶೀಖರ ಚಾರಣಿಗರ ವಿಶ್ರಾಂತಿ ಧಾಮವು ಇದೆ
ಇದು 2017 ರಲ್ಲಿ ಸ್ಥಾಪನೆಯಾಗಿದ್ದು ಅಂದಿನಿಂದ ಇಂದಿನ ವರೆಗೂ ಇಲ್ಲಿಗೆ ಬಂದ ಎಲ್ಲ ಅತಿಥಿಗಳ ಸಂತೃಪ್ತಿ ಮತ್ತು ಹೊಗಳಿಕೆಗೆ ಪಾತ್ರವಾಗಿದ್ದು, ಒಮ್ಮೆ ನಮ್ಮಲ್ಲಿಗೆ ಭೇಟಿ ಕೊಟ್ಟವರು ಮತ್ತೆ ಮತ್ತೆ ಇಲ್ಲಿಗೆ ಬರಲು ಬಯಸುತ್ತಾರೆ.
ನಾವಿರುವ ತಾಣವು ಸುಂದರವಾದ ಏಲಕ್ಕಿ, ಣಸು, ಕಾಫಿಯ, ತೋಟಗಳು, ಹಚ್ಚಹಸುರಿನ ಗದ್ದೆಗಳು ಮುಗಿಲನ್ನು ಚುಂಬಿಸುವ ಪಶ್ಚಿಮಘಟ್ಟಗಳು ಸುತ್ತಲೂ ಆವರಿಸುವ ಮೋಡಗಳು ತಂಗಾಳಿ, ನೀರಿನ ಝರಿಗಳು,ಹಕ್ಕಿಗಳ ಚಿಲಿಪಿಲಿ ನಾದದಿಂದ ಆವೃತವಾಗಿದ್ದು ಮನಸ್ಸಿನಲ್ಲಿ ಚಿರಕಾಲ ಉಳಿಯುವಂತ ತಾಣವಾಗಿದೆ. ಪ್ರಕೃತಿಯ ಶಾಂತತೆಯನ್ನು ಬಯಸುವವರಿಗೆ ನಮ್ಮ ಪ್ರವಾಸಿ ವಿಶ್ರಾಂತಿ ಧಾಮವು ಅತ್ಯಂತ ಪ್ರಿಯವಾದ ತಾಣವಾಗಿದೆ.
ಕುದುರೆಮುಖದ ಶಿಖರಕ್ಕೆ ಕಾಲನಡಿಗೆಯಲ್ಲಿ ಚಾರಣಹೋಗುವವರಿಗೆ ಪೂರ್ವಭಾವಿಯಾಗಿ ಅರಣ್ಯ ಇಲಾಖೆಯಿಂದ ಪಡೆಯಬೇಕಾದ ಅನುಮತಿ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ ಅವರ ಅನುಕಾಲಕ್ಕಾಗಿ ಜೊತೆಗೆ ಮಾರ್ಗದರ್ಶಕರನ್ನು ಕಳುಹಿಸಿಕೊಡುತ್ತೇವೆ. ಮುಂಜಾನೆಯೆ ಅವರನ್ನು ಕುದುರೆಮುಖದ ಶಿಖರ ಚಾರಣದ ಆರಂಭ ಸ್ಥಳಕ್ಕೆ ಕರೆದೊಯ್ಯಲು ಮತ್ತು ಸಂಜೆ ಅವರನ್ನು ವಾಪಸ್ ಕರೆತರಲು ಕರೆತರಲು ಜೀಪ್ ವ್ಯವಸ್ಥೆ ಇರುತ್ತದೆ.
ಬೆಟ್ಟದ ಶಿಖರ ಏರುವ ಯಾವುದೇ ಅನುಭವ ಇಲ್ಲದವರು ಸುಲಭವಾಗಿ ಚಾರಣ ಮಾಡಬಹುದಾದ ಪ್ರಕೃತಿಮಾತೆಯ ಸುಂದರ , ಅವರ್ಣನೀಯಯವಾದ ರೋಮಾಂಚನದ ಅನುಭವ ನೀಡುವ ತಾಣ
ನಮ್ಮ ಸುತ್ತಮುತ್ತಲು ಇರುವ ಅತ್ಯಂತ ರಮಣೀಯವಾದ ಪ್ರೇಕ್ಷಣೀಯ ಸ್ಥಳಗಳಾದ ಕ್ಯಾತನಮಕ್ಕಿ ಬೆಟ್ಟ, ರಾಣಿಝರಿ ಬೆಟ್ಟ, ಮೈದಾಡಿ ಬೆಟ್ಟ, ಬಾಮಿಕೊಂಡ (ಹೃದಯ ಆಕಾರದ ಗದ್ದೆ), ಸೋಮಾವತಿ ಜಲಪಾತ, ಎಳನೀರು ಜಲಪಾತ, ಸೇರುಮನೆ ಜಲಪಾತ, ಭದ್ರಾನದಿ ತೆಪ್ಪ ಸಾಹಸ ಕ್ರೀಡೆ, ಅಂಬಾತೀರ್ಥ, ಹೊರನಾಡು, ಕಳಸ ಇಲ್ಲಿಗೆ ಹೋಗಿ ಬರಲು ಜೀಪ್, ಕ್ಯಾಬ್,ಬೈಕ್ ಮತ್ತು ಮಾರ್ಗದರ್ಶಕರ ವ್ಯವಸ್ಥೆ ಮಾಡಲಾಗಿದೆ .
ಚೊಕ್ಕವಾಗಿ ನಿರ್ವಹಿಸಿರುವ 1x 2 ಹಾಸಿಗೆ ಇರುವ 2 ಕುಟೀರಗಳಿದ್ದು , ಸ್ನಾನ ಮತ್ತು ಶೌಚಾಲಯದ ವ್ಯವಸ್ಥೆ ಹೊಂದಿರುತ್ತದೆ. 24 ಗಂಟೆಗಳ ಬಿಸಿ ಮತ್ತು ತಣ್ಣೀರಿನ ವ್ಯವಸ್ಥೆ ಇರುತ್ತದೆ.
ಅತಿಥಿಗಳ ವಿಶ್ರಾಂತಿಗಾಗಿ 21 ಟೆಂಟ್ ವ್ಯವಸ್ಥೆಯಿರುತ್ತದೆ
ಬಿಎಸ್ಎನ್ಎಲ್, ಏರ್ಟೆಲ್ ,ಜಿಯೋ ನೆಟ್ವರ್ಕ್ ಸಂಪರ್ಕವಿರುತ್ತದೆ.
ಕಾಫಿ, ಚಹ, ಹಾಲು, ಮಲೆನಾಡಿನ ಕಷಾಯ ಮುಂತಾದ ಪಾನೀಯಗಳ ವ್ಯವಸ್ಥೆ ಇರುತ್ತದೆ. ಅತಿಥಿಗಳ ಅಭಿರುಚಿಗೆ ತಕ್ಕಂತೆ ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ವ್ಯವಸ್ಥೆ ಇರುತ್ತದೆ. ಒಂದು ವೇಳೆ ಅವರು ಸ್ವತಃ ಅಡುಗೆ ಮಾಡಿಕೊಳ್ಳಲು ಬಯಸಿದರೆ ಅಗತ್ಯದ ಪರಿಕರಗಳನ್ನು ಒದಗಿಸಿ ಕೊಡಲಾಗುತ್ತದೆ. ಕುಡಿಯಲು ಶುದ್ದವಾದ ಬಿಸಿ ಮತ್ತು ತಣ್ಣೀರಿನ ವ್ಯವಸ್ಥೆ ಇರುತ್ತದೆ.
ನಮ್ಮಲ್ಲಿ ವಿಶಾಲವಾದ ಬಯಲು ಪ್ರದೇಶ ಇರುವುದರಿಂದ ನಮ್ಮಲ್ಲಿಗೆ ಸ್ವಂತ ವಾಹನದಲ್ಲಿ ಬರುವವರಿಗೆ ಅವರ ವಾಹನವನ್ನು ನಿಲ್ಲಿಸಲು ಯಾವುದೇ ಅನಾನುಕೋಲತೆ ಇರುವುದಿಲ್ಲ. ಕುಟೀರಗಳಲ್ಲಿ ಅವರ ಸರಂಜಾಮುಗಳನ್ನು ಇಟ್ಟುಕೊಳ್ಳಲು ಸ್ಥಳಾವಕಾಶ ಇದ್ದು , ಅತಿಥಿಗಳ ವಾಹನಗಳು ಮತ್ತು ಸರಂಜಾಮುಗಳ ಬಗ್ಗೆ ನಮ್ಮ ಸಿಬ್ಬಂದಿಯವರೇ ಎಚ್ಚರ ವಹಿಸುತ್ತಾರೆ.
ಅತಿಥಿಗಳ ಬಿಡುವಿನ ವೇಳೆಯಲ್ಲಿ ಅವರ ಮನರಂಜನೆಗಾಗಿ ಕೇರಂ, ಡಿಸ್ಕ್, ಕ್ರಿಕೆಟ್, ವಾಲಿಬಾಲ್ ಅಟಗಳನ್ನು ಆಡಲು ಅಗತ್ಯವಿರುವ ಪರಿಕರಗಳು ಇರುತ್ತದೆ, ಸಂಜೆ ಅವರ ಮನೋಲ್ಲಾಸಕ್ಕಾಗಿ ಡಿ ಜೆ ವ್ಯವಸ್ಥೆ ಇರುತ್ತದೆ, ಜೊತೆಗೆ ಕ್ಯಾಂಪ್ಫೈರ್ಗೆ ಅಗತ್ಯವಿರುವ ವ್ಯವಸ್ಥೆ ಇರುತ್ತದೆ.
ಸ್ನೇಹಪೂರ್ವಕವಾದ, ಸೇವಾ ಮನೋಭಾವನೆಯ, ವಿನಮ್ರ ಹಾಗೂ ಬದ್ದತೆಯ ಸಿಬ್ಬಂದಿವರ್ಗವನ್ನು ನಾವು ಹೊಂದಿದ್ದು ಇದುವರೆವಿಗೂ ನಮ್ಮಲ್ಲಿಗೆ ಬಂದಿರುವ ಅತಿಥಿಗಳ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಇಲ್ಲಿಗೆ ಬರುವ ಅತಿಥಿಗಳು ನೀಡುವ ನ್ಯಾಯೋಚಿತ ಸಲಹೆ ಸೂಚನೆಗಳನ್ನು ನಾವು ತಪ್ಪದೇ ಅಳವಡಿಸಿಕೊಳ್ಳುತ್ತೇವೆ.
ಮೇಲ್ಕಂಡ ಎಲ್ಲಾ ವಿಶೇಷತೆಗಳಿದ್ದರೂ ಸಹ ನಮ್ಮ ಉತ್ತಮ ಗುಣಮಟ್ಟದ ಸೇವಾಸೌಲಭ್ಯಗಳು ದುಬಾರಿಯಾಗಿರದೆ ನ್ಯಾಯಬೆಲೆಯದ್ದಾಗಿರುತ್ತದೆ. ಒಮ್ಮೆ ಬರುವ ಅತಿಥಿಗಳು ಮತ್ತೋಮ್ಮೆ ನಮ್ಮಲ್ಲಿಗೆ ಬರಬೇಕು ಹಾಗೂ ಇತರೆಯವರಿಗೂ ನಮ್ಮಲ್ಲಿನ ಸೇವಾ ಸೌಲಭ್ಯಗಳ ಬಗ್ಗೆ ಹೇಳಬೇಕೆನ್ನುವುದು ನಮ್ಮ ಮಹದಾಸೆಯಾಗಿದೆ.
ಬೆಳಗಿನ ಉಪಹಾರ
ಮಧ್ಯಾಹ್ನದ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ -ಕ್ಯಾರಿಯರ್
ಕುದುರೆಮುಖದ ಶಿಖರ ಕ್ಕೆ ಹೋಗಿ ಬರುವ ವ್ಯವಸ್ಥೆ
ಸಂಜೆ ಲಘು ಉಪಹಾರ
ಸಂಜೆ ಡಿ ಜೆ ಮತ್ತು ಕ್ಯಾಂಪ್ಫೈರ್
ರಾತ್ರಿ 3 ಹಾಸಿಗೆಗಳಿರುವ ಕುಟೀರ ತಂಗುವ ವ್ಯವಸ್ಥೆ
ರಾತ್ರಿ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ
ವಿಶ್ರಾಂತಿ
ಮಾರನೆಯ ದಿನ ಮುಂದಿನ ಪ್ರಯಾಣ
ಬೆಳಗಿನ ಉಪಹಾರ
ಮಧ್ಯಾಹ್ನದ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ -ಕ್ಯಾರಿಯರ್
ಕುದುರೆಮುಖದ ಶಿಖರ ಕ್ಕೆ ಹೋಗಿ ಬರುವ ವ್ಯವಸ್ಥೆ
ಸಂಜೆ ಲಘು ಉಪಹಾರ
ಸಂಜೆ ಡಿ ಜೆ ಮತ್ತು ಕ್ಯಾಂಪ್ಫೈರ್
ರಾತ್ರಿ 3 ಹಾಸಿಗೆಗಳಿರುವ ಕುಟೀರ ತಂಗುವ ವ್ಯವಸ್ಥೆ
ರಾತ್ರಿ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ
ವಿಶ್ರಾಂತಿ
ಬೆಳಗಿನ ಉಪಹಾರ
ಮಧ್ಯಾಹ್ನದ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ -ಕ್ಯಾರಿಯರ್
ಕ್ಯಾತನಮಕ್ಕಿ ಬೆಟ್ಟ, ರಾಣಿಝರಿ ಬೆಟ್ಟ, ಮೈದಾಡಿ ಬೆಟ್ಟ, ಬಾಮಿಕೊಂಡ (ಹೃದಯ ಆಕಾರದ ಗದ್ದೆ), ಸೋಮಾವತಿ ಜಲಪಾತ, ಕ್ಕೆ ಹೋಗಿ ಬರುವ ವ್ಯವಸ್ಥೆ
ಸಂಜೆ ಲಘು ಉಪಹಾರ,
ಸಂಜೆ ಡಿ ಜೆ ಮತ್ತು ಕ್ಯಾಂಪ್ಫೈರ್
ರಾತ್ರಿ 3 ಹಾಸಿಗೆಗಳಿರುವ ಕುಟೀರ ತಂಗುವ ವ್ಯವಸ್ಥೆ
ವಿಶ್ರಾಂತಿ
ಮಾರನೆಯ ದಿನ ಮುಂದಿನ ಪ್ರಯಾಣ
ಬೆಳಗಿನ ಉಪಹಾರ
ಮಧ್ಯಾಹ್ನದ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ -ಕ್ಯಾರಿಯರ್
ಕುದುರೆಮುಖದ ಶಿಖರ ಕ್ಕೆ ಹೋಗಿ ಬರುವ ವ್ಯವಸ್ಥೆ
ಸಂಜೆ ಲಘು ಉಪಹಾರ
ಸಂಜೆ ಡಿ ಜೆ ಮತ್ತು ಕ್ಯಾಂಪ್ಫೈರ್
ರಾತ್ರಿ 3 ಹಾಸಿಗೆಗಳಿರುವ ಕುಟೀರ ತಂಗುವ ವ್ಯವಸ್ಥೆ
ರಾತ್ರಿ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ
ವಿಶ್ರಾಂತಿ
ಬೆಳಗಿನ ಉಪಹಾರ
ಮಧ್ಯಾಹ್ನದ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ -ಕ್ಯಾರಿಯರ್
ಕ್ಯಾತನಮಕ್ಕಿ ಬೆಟ್ಟ, ರಾಣಿಝರಿ ಬೆಟ್ಟ, ಮೈದಾಡಿ ಬೆಟ್ಟ, ಬಾಮಿಕೊಂಡ (ಹೃದಯ ಆಕಾರದ ಗದ್ದೆ), ಸೋಮಾವತಿ ಜಲಪಾತ, ಕ್ಕೆ ಹೋಗಿ ಬರುವ ವ್ಯವಸ್ಥೆ
ಸಂಜೆ ಲಘು ಉಪಹಾರ,
ಸಂಜೆ ಡಿ ಜೆ ಮತ್ತು ಕ್ಯಾಂಪ್ಫೈರ್
ರಾತ್ರಿ 3 ಹಾಸಿಗೆಗಳಿರುವ ಕುಟೀರ ತಂಗುವ ವ್ಯವಸ್ಥೆ
ವಿಶ್ರಾಂತಿ
ಮಾರನೆಯ ದಿನ ಮುಂದಿನ ಪ್ರಯಾಣ
ಬೆಳಗಿನ ಉಪಹಾರ
ಮಧ್ಯಾಹ್ನದ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ -ಕ್ಯಾರಿಯರ್
ಎಳನೀರು ಜಲಪಾತ, ಸೇರುಮನೆ ಜಲಪಾತ, ಭದ್ರಾನದಿ ತೆಪ್ಪ ಸಾಹಸ ಕ್ರೀಡೆ, ಅಥವಾ ಅಂಬಾತೀರ್ಥ, ಹೊರನಾಡು, ಕಳಸ ಇಲ್ಲಿಗೆ ಹೋಗಿ ಬರಲು ವ್ಯವಸ್ಥೆ
ಸಂಜೆ ಲಘು ಉಪಹಾರ
ಸಂಜೆ ಡಿ ಜೆ ಮತ್ತು ಕ್ಯಾಂಪ್ಫೈರ್
ರಾತ್ರಿ 3 ಹಾಸಿಗೆಗಳಿರುವ ಕುಟೀರ ತಂಗುವ ವ್ಯವಸ್ಥೆ
ರಾತ್ರಿ ಊಟ- ಸಸ್ಯಾಹಾರ ಅಥವಾ ಮಾಂಸಾಹಾರ
ವಿಶ್ರಾಂತಿ
ಮಾರನೆಯ ದಿನ ಮುಂದಿನ ಪ್ರಯಾಣ
We love our customers, so feel free to visit during normal business hours.
Open today | 07:00 am – 09:00 pm |
Copyright © 2024 Kurdremukh Trekkers' stay home - All Rights Reserved.
Maintained by Poorna Infotec